عَنْ أَبِي هُرَيْرَةَ رَضِيَ اللَّهُ عَنْهُ قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«قَالَ اللَّهُ عَزَّ وَجَلَّ: يُؤْذِينِي ابْنُ آدَمَ يَسُبُّ الدَّهْرَ وَأَنَا الدَّهْرُ، بِيَدِي الأَمْرُ أُقَلِّبُ اللَّيْلَ وَالنَّهَارَ».
[صحيح] - [متفق عليه] - [صحيح البخاري: 4826]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: 'ಆದಮನ ಮಗ (ಮನುಷ್ಯನು) ನನಗೆ ತೊಂದರೆ ಕೊಡುತ್ತಾನೆ. ಅವನು ಕಾಲವನ್ನು ದೂಷಿಸುತ್ತಾನೆ. ನಾನೇ 'ಅದ್ದಹ್ರ್' (ಕಾಲದ ಒಡೆಯ). ಕಾರ್ಯವು ನನ್ನ ಕೈಯಲ್ಲಿದೆ; ನಾನು ರಾತ್ರಿ ಮತ್ತು ಹಗಲನ್ನು ಬದಲಿಸುತ್ತೇನೆ' ".
[صحيح] - [متفق عليه] - [صحيح البخاري - 4826]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹದೀಸ್ ಕುದ್ಸಿಯಲ್ಲಿ ಹೇಳುತ್ತಾನೆ: ವಿಪತ್ತುಗಳು ಮತ್ತು ಕಷ್ಟಗಳು ಬಂದಾಗ ಕಾಲವನ್ನು ದೂಷಿಸುವ ಮತ್ತು ನಿಂದಿಸುವ ಮೂಲಕ ಮನುಷ್ಯನು ನನಗೆ ತೊಂದರೆ ಕೊಡುತ್ತಾನೆ ಮತ್ತು ನನ್ನನ್ನು ಕ್ಷುಲ್ಲಕವಾಗಿ ಪರಿಗಣಿಸುತ್ತಾನೆ. ಏಕೆಂದರೆ ಸಂಭವಿಸುವ ಎಲ್ಲಾ ವಿದ್ಯಮಾನಗಳ ಏಕೈಕ ನಿಯಂತ್ರಕ ಮತ್ತು ನಿರ್ದೇಶಕ ಪರಿಶುದ್ಧನಾದ ಅಲ್ಲಾಹುವಾಗಿದ್ದಾನೆ. ಆದ್ದರಿಂದ, ಕಾಲವನ್ನು ದೂಷಿಸುವುದು ಸರ್ವಶಕ್ತನಾದ ಅಲ್ಲಾಹುವನ್ನು ದೂಷಿಸಿದಂತೆ. ಕಾಲವೆಂದರೆ ಕೇವಲ ಅಧೀನಗೊಳಿಸಲ್ಪಟ್ಟ ಒಂದು ಸೃಷ್ಟಿಯಾಗಿದೆ. ಅಲ್ಲಾಹುವಿನ ಆದೇಶದಂತೆ ಅದರಲ್ಲಿ ಘಟನೆಗಳು ಸಂಭವಿಸುತ್ತವೆ.