عَن هَانِئ مَوْلَى عُثْمَانَ رَضيَ اللهُ عنهُ قَالَ: كَانَ عُثْمَانُ إِذَا وَقَفَ عَلَى قَبْرٍ بَكَى حَتَّى يَبُلَّ لِحْيَتَهُ، فَقِيلَ لَهُ: تُذْكَرُ الْجَنَّةُ وَالنَّارُ فَلَا تَبْكِي، وَتَبْكِي مِنْ هَذَا؟ فَقَالَ: إِنَّ رَسُولَ اللهِ صلى الله عليه وسلم قَالَ:
«إِنَّ الْقَبْرَ أَوَّلُ مَنْزِلٍ مِنْ مَنَازِلِ الْآخِرَةِ، فَإِنْ نَجَا مِنْهُ فَمَا بَعْدَهُ أَيْسَرُ مِنْهُ، وَإِنْ لَمْ يَنْجُ مِنْهُ فَمَا بَعْدَهُ أَشَدُّ مِنْهُ».
[حسن] - [رواه الترمذي وابن ماجه] - [سنن الترمذي: 2308]
المزيــد ...
ಉಸ್ಮಾನ್‌ರ ವಿಮೋಚಿತ ಗುಲಾಮರಾದ ಹಾನಿಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಸಮಾಧಿಯ ಬಳಿ ನಿಂತಾಗ, ತಮ್ಮ ಗಡ್ಡವು ಒದ್ದೆಯಾಗುವವರೆಗೆ ಅಳುತ್ತಿದ್ದರು. ಆಗ ಅವರೊಡನೆ ಕೇಳಲಾಯಿತು: "ನೀವು ಮುಂದೆ ಸ್ವರ್ಗ ಮತ್ತು ನರಕವನ್ನು ನೆನಪಿಸಿಕೊಳ್ಳುತ್ತೀರಿ. ಆಗ ನೀವು ಅಳುವುದಿಲ್ಲ. ಆದರೆ ಇದರ (ಸಮಾಧಿಯ) ಕಾರಣದಿಂದ ಅಳುತ್ತೀರೇಕೆ?" ಅದಕ್ಕೆ ಅವರು ಹೇಳಿದರು: ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದಾರೆ:
"ಖಂಡಿತವಾಗಿಯೂ ಸಮಾಧಿಯು ಪರಲೋಕದ ಹಂತಗಳಲ್ಲಿ ಮೊದಲ ಹಂತವಾಗಿದೆ. ಒಬ್ಬನು ಅದರಿಂದ ಪಾರಾದರೆ, ಅದರ ನಂತರ ಬರುವುದು ಅದಕ್ಕಿಂತ ಸುಲಭವಾಗಿರುತ್ತದೆ. ಒಂದು ವೇಳೆ ಅವನು ಅದರಿಂದ ಪಾರಾಗದಿದ್ದರೆ, ಅದರ ನಂತರ ಬರುವುದು ಅದಕ್ಕಿಂತ ಕಠಿಣವಾಗಿರುತ್ತದೆ".
[حسن] - [رواه الترمذي وابن ماجه] - [سنن الترمذي - 2308]
ಸತ್ಯವಿಶ್ವಾಸಿಗಳ ನಾಯಕ (ಅಮೀರುಲ್-ಮುಅ್‌ಮಿನೀನ್) ಉಸ್ಮಾನ್ ಬಿನ್ ಅಫ್ಫಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಸಮಾಧಿಯ ಬಳಿ ನಿಂತಾಗ, ತಮ್ಮ ಕಣ್ಣೀರಿನಿಂದ ಗಡ್ಡವು ಒದ್ದೆಯಾಗುವವರೆಗೆ ಅಳುತ್ತಿದ್ದರು. ಆಗ ಅವರೊಡನೆ ಕೇಳಲಾಯಿತು: ನೀವು ಮುಂದೆ ಸ್ವರ್ಗ ಮತ್ತು ನರಕವನ್ನು ನೆನಪಿಸಿಕೊಳ್ಳುತ್ತೀರಿ. ಆಗ ಸ್ವರ್ಗದ ಹಂಬಲದಿಂದ ಅಥವಾ ನರಕದ ಭಯದಿಂದ ಅಳುವುದಿಲ್ಲ! ಆದರೆ ಸಮಾಧಿಯ ಕಾರಣದಿಂದ ಅಳುತ್ತೀರೇಕೆ? ಅದಕ್ಕೆ ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದಾರೆ: ಸಮಾಧಿಯು ಪರಲೋಕದ ಹಂತಗಳಲ್ಲಿ ಮೊದಲ ಹಂತವಾಗಿದೆ. ಒಬ್ಬನು ಅದರಿಂದ ಪಾರಾಗಿ ವಿಮೋಚನೆಗೊಂಡರೆ, ಅದರ ನಂತರದ ಹಂತಗಳು ಅದಕ್ಕಿಂತ ಸುಲಭವಾಗಿರುತ್ತವೆ. ಒಂದು ವೇಳೆ ಅವನು ಅದರ ಶಿಕ್ಷೆಯಿಂದ ಪಾರಾಗದಿದ್ದರೆ; ಅದರ ನಂತರ ಬರುವ ಶಿಕ್ಷೆಯು ಅದರಲ್ಲಿರುವುದಕ್ಕಿಂತ ಕಠಿಣವಾಗಿರುತ್ತದೆ.