عَن أَبي هُرَيْرَةَ رضي الله عنه عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«لاَ يُشِيرُ أَحَدُكُمْ عَلَى أَخِيهِ بِالسِّلاَحِ، فَإِنَّهُ لاَ يَدْرِي، لَعَلَّ الشَّيْطَانَ يَنْزِعُ فِي يَدِهِ، فَيَقَعُ فِي حُفْرَةٍ مِنَ النَّارِ».

[صحيح] - [متفق عليه] - [صحيح البخاري: 7072]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲಿ ಯಾರೂ ತನ್ನ ಸಹೋದರನತ್ತ ಆಯುಧವನ್ನು ತೋರಿಸಬಾರದು. ಏಕೆಂದರೆ ಅವನಿಗೆ ತಿಳಿದಿಲ್ಲ, ಬಹುಶಃ ಶೈತಾನನು ಅವನ ಕೈಯನ್ನು ಚಲಿಸುವಂತೆ ಮಾಡಬಹುದು, ಆಗ ಅವನು (ಆ ಕಾರಣದಿಂದ) ನರಕದ ಒಂದು ಹೊಂಡದಲ್ಲಿ ಬೀಳುವ ಸಾಧ್ಯತೆಯಿದೆ".

[صحيح] - [متفق عليه] - [صحيح البخاري - 7072]

ವಿವರಣೆ

ಒಬ್ಬ ಮುಸ್ಲಿಂ ತನ್ನ ಮುಸ್ಲಿಂ ಸಹೋದರನಿಗೆ ಯಾವುದೇ ರೀತಿಯ ಶಸ್ತ್ರದಿಂದ ಸೂಚಿಸುವುದರ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ್ದಾರೆ. ಏಕೆಂದರೆ, ಅವನಿಗೆ ತಿಳಿದಿರಲಾರದು, ಬಹುಶಃ ಶೈತಾನನು ಅವನ ಕೈಯಲ್ಲಿರುವ ಶಸ್ತ್ರಾಸ್ತ್ರವನ್ನು ಚಲಿಸುವಂತೆ ಪ್ರೇರೇಪಿಸಿ, ಅವನು ತನ್ನ ಸಹೋದರನನ್ನು ಕೊಲ್ಲುವಂತೆ ಅಥವಾ ಅವನಿಗೆ ಗಾಯಗೊಳಿಸುವಂತೆ ಮಾಡಬಹುದು. ಇದರಿಂದಾಗಿ, ಅವನು ಪಾಪದಲ್ಲಿ ಏರ್ಪಟ್ಟು, ಅದು ಅವನನ್ನು ನರಕದ ಹೊಂಡದಲ್ಲಿ ಬೀಳಲು ಕಾರಣವಾಗಬಹುದು.

ಹದೀಸಿನ ಪ್ರಯೋಜನಗಳು

  1. ಒಬ್ಬ ಮುಸ್ಲಿಮನ ರಕ್ತದ ಪಾವಿತ್ರ್ಯತೆಯನ್ನು ವಿವರಿಸಲಾಗಿದೆ.
  2. ಮುಸ್ಲಿಮನನ್ನು ಗೌರವಿಸುವುದು ಮತ್ತು ಮಾತು ಹಾಗೂ ಕ್ರಿಯೆಯ ಮೂಲಕ ಅವನಿಗೆ ಕೆಡುಕು ಉಂಟಾಗದಂತೆ ಎಚ್ಚರವಹಿಸುವುದು ಕಡ್ಡಾಯವಾಗಿದೆ. ತಮಾಷೆಗೂ ಸಹ, ಕಬ್ಬಿಣದ ಆಯುಧ ಅಥವಾ ಶಸ್ತ್ರಾಸ್ತ್ರವನ್ನು ತೋರಿಸುವುದು ಇದರಲ್ಲಿ ಸೇರುತ್ತದೆ. ಏಕೆಂದರೆ ಶೈತಾನನು ಅವನ ಕೈಯನ್ನು ಪ್ರಚೋದಿಸಬಹುದು ಮತ್ತು ಅವನ ಸಹೋದರನಿಗೆ ಹೊಡೆಯುವುದನ್ನು ಸುಂದರವಾಗಿ ತೋರಿಸಬಹುದು. ಅಥವಾ ಶಸ್ತ್ರವು ಅವನ ಕೈಯಿಂದ ಜಾರುವಂತೆ ಮಾಡಿ ಅದು ಪ್ರಮಾದವಶಾತ್ ಬಿದ್ದು ಅವನ ಸಹೋದರನಿಗೆ ಹಾನಿ ಉಂಟುಮಾಡಬಹುದು.
  3. ನಿಷಿದ್ಧ ಕಾರ್ಯಕ್ಕೆ ಒಯ್ಯುವ ವಿಷಯಗಳನ್ನು ನಿಷೇಧಿಸುವ ಮೂಲಕ ಕೆಡುಕಿಗೆ ದಾರಿ ಮಾಡಿಕೊಡುವ ದ್ವಾರಗಳನ್ನು ಮುಚ್ಚಲಾಗಿದೆ.
  4. ಸಮಾಜದ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು, ಜನರ ನಡುವಿನ ಸಂಬಂಧಗಳನ್ನು ಕಾಪಾಡಬೇಕು, ಮತ್ತು ಸೂಚನೆ ಅಥವಾ ಬೆದರಿಕೆಯ ಮೂಲಕವಾದರೂ ಅವರನ್ನು ಭಯಭೀತಗೊಳಿಸಬಾರದು ಮತ್ತು ಹೆದರಿಸಬಾರದೆಂದು ತಿಳಿಸಲಾಗಿದೆ.
ಅನುವಾದಗಳನ್ನು ತೋರಿಸಿ
ಭಾಷೆ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಇನ್ನಷ್ಟು (38)