عَنِ ابْنِ عُمَرَ رَضِيَ اللَّهُ عَنْهُمَا أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«إِنَّمَا مَثَلُ صَاحِبِ القُرْآنِ كَمَثَلِ صَاحِبِ الإِبِلِ المُعَقَّلَةِ، إِنْ عَاهَدَ عَلَيْهَا أَمْسَكَهَا، وَإِنْ أَطْلَقَهَا ذَهَبَتْ».
[صحيح] - [متفق عليه] - [صحيح البخاري: 5031]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಕುರ್‌ಆನ್ ಕಂಠಪಾಠ ಮಾಡಿದವನ ಉದಾಹರಣೆಯು, ಕಟ್ಟಿಹಾಕಲಾದ ಒಂಟೆಗಳ ಮಾಲೀಕನಂತಿದೆ. ಅವನು ಅವುಗಳ ಬಗ್ಗೆ ನಿರಂತರ ನಿಗಾ ವಹಿಸಿದರೆ, ಅವುಗಳನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಆದರೆ, ಅವನು ಅವುಗಳನ್ನು (ಕಟ್ಟು ಬಿಚ್ಚಿ) ಬಿಟ್ಟರೆ, ಅವು (ತಪ್ಪಿಸಿಕೊಂಡು) ಹೊರಟುಹೋಗುತ್ತವೆ".
[صحيح] - [متفق عليه] - [صحيح البخاري - 5031]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರ್‌ಆನ್ ಅನ್ನು ಅಧ್ಯಯನ ಮಾಡಿದ ಮತ್ತು ಅದನ್ನು ಪಠಿಸಲು ಅಭ್ಯಾಸ ಮಾಡಿಕೊಂಡವನನ್ನು — ಅದು ಮುಸ್‌ಹಫ್ (ಗ್ರಂಥ) ದಿಂದ ನೇರವಾಗಿ ನೋಡಿಯಾಗಿರಲಿ ಅಥವಾ ಕಂಠಪಾಠದಿಂದಾಗಿರಲಿ - ಒಂಟೆಯ ಮಂಡಿಗೆ ಕಟ್ಟಲಾಗುವ ಹಗ್ಗದಿಂದ ಕಟ್ಟಿಹಾಕಲಾದ ಒಂಟೆಗಳ ಮಾಲೀಕನಿಗೆ ಹೋಲಿಸಿದ್ದಾರೆ. ಅವನು ಅವುಗಳ ಬಗ್ಗೆ ನಿರಂತರ ನಿಗಾ ವಹಿಸಿದರೆ, ಅವುಗಳ ಮೇಲೆ ಅವನ ಹತೋಟಿ ನಿರಂತರವಾಗಿರುತ್ತದೆ. ಆದರೆ, ಅವನು ಅವುಗಳ ಕಟ್ಟನ್ನು ಬಿಚ್ಚಿದರೆ, ಅವು ಹೊರಟುಹೋಗುತ್ತವೆ ಮತ್ತು ತಪ್ಪಿಸಿಕೊಳ್ಳುತ್ತವೆ. ಹಾಗೆಯೇ, ಕುರ್‌ಆನನ್ನು ಪಠಿಸುತ್ತಿದ್ದರೆ, ಅದು ಅವನಿಗೆ ನೆನಪಿರುತ್ತದೆ. ಆದರೆ, ಅವನು ಅದನ್ನು ಪಠಿಸುವುದನ್ನು ಬಿಟ್ಟುಬಿಟ್ಟರೆ, ಅವನು ಅದನ್ನು ಮರೆತುಬಿಡುತ್ತಾನೆ. ಆದ್ದರಿಂದ, ಎಲ್ಲಿಯವರೆಗೆ ಗಮನವು ಇರುತ್ತದೋ, ಅಲ್ಲಿಯವರೆಗೆ ಕಂಠಪಾಠವು ಇರುತ್ತದೆ.