+ -

عَنْ كَعْبِ بْنِ عُجْرَةَ رضي الله عنه عَنْ رَسُولِ اللهِ صَلَّى اللهُ عَلَيْهِ وَسَلَّمَ قَالَ:
«مُعَقِّبَاتٌ لَا يَخِيبُ قَائِلُهُنَّ -أَوْ فَاعِلُهُنَّ- دُبُرَ كُلِّ صَلَاةٍ مَكْتُوبَةٍ، ثَلَاثٌ وَثَلَاثُونَ تَسْبِيحَةً، وَثَلَاثٌ وَثَلَاثُونَ تَحْمِيدَةً، وَأَرْبَعٌ وَثَلَاثُونَ تَكْبِيرَةً».

[صحيح] - [رواه مسلم] - [صحيح مسلم: 596]
المزيــد ...

ಕಅಬ್ ಬಿನ್ ಉಜ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಕಡ್ಡಾಯ ನಮಾಝ್‌ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ ನಿರಾಶನಾಗುವುದಿಲ್ಲ. ಮೂವತ್ತಮೂರು ತಸ್ಬೀಹ್‌ಗಳು, ಮೂವತ್ತಮೂರು ತಹ್ಮೀದ್‌ಗಳು ಮತ್ತು ಮೂವತ್ತನಾಲ್ಕು ತಕ್ಬೀರ್‌ಗಳು."

[صحيح] - [رواه مسلم] - [صحيح مسلم - 596]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಸ್ಮರಣೆಗಳ ಬಗ್ಗೆ ತಿಳಿಸಿದ್ದಾರೆ. ಅವುಗಳನ್ನು ಪಠಿಸುವವನಿಗೆ ನಷ್ಟವಾಗುವುದೂ ಇಲ್ಲ ಮತ್ತು ಅವನು ನಿರಾಶನಾಗುವುದೂ ಇಲ್ಲ. ಬದಲಿಗೆ, ಅವನಿಗೆ ಈ ಪದಗಳನ್ನು ಪಠಿಸಿದ್ದಕ್ಕೆ ಪ್ರತಿಫಲವಿದೆ. ಅವುಗಳಲ್ಲಿ ಒಂದನ್ನು ಇನ್ನೊಂದರ ನಂತರ ಹೇಳಬೇಕಾಗಿದೆ. ಅವುಗಳನ್ನು ಕಡ್ಡಾಯ ನಮಾಝ್‌ಗಳ ನಂತರ ಹೇಳಬೇಕಾಗಿದೆ. ಅವು:
"ಸು‌ಬ್‌ಹಾನಲ್ಲಾಹ್" (ಮೂವತ್ತ ಮೂರು ಬಾರಿ) ಇದು ಅಲ್ಲಾಹನನ್ನು ಎಲ್ಲಾ ರೀತಿಯ ನ್ಯೂನತೆಗಳಿಂದ ಪರಿಶುದ್ಧಗೊಳಿಸುವುದಾಗಿದೆ.
"ಅಲ್-ಹಮ್ದುಲಿಲ್ಲಾಹ್" (ಮೂವತ್ತ ಮೂರು ಬಾರಿ) ಇದು ಅಲ್ಲಾಹನನ್ನು ಪ್ರೀತಿಸುವುದು ಮತ್ತು ಮಹಿಮೆಪಡಿಸುವುದರ ಜೊತೆಗೆ ಅವನನ್ನು ಸರ್ವಸಂಪೂರ್ಣನೆಂದು ಬಣ್ಣಿಸುವುದಾಗಿದೆ.
"ಅಲ್ಲಾಹು ಅಕ್ಬರ್" (ಮೂವತ್ತ ನಾಲ್ಕು ಬಾರಿ) ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ದೊಡ್ಡವನು ಮತ್ತು ಮಹಾಮಹಿಮನು ಎಂದು ಘೋಷಿಸುವುದಾಗಿದೆ.

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية اليوروبا الليتوانية الدرية الصربية الصومالية الكينياروندا الرومانية المجرية التشيكية الموري المالاجاشية الأورومو الولوف الأوكرانية الجورجية
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ತಸ್ಬೀಹ್, ತಹ್ಮೀದ್ ಮತ್ತು ತಕ್ಬೀರ್‌ಗಳ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಅವು ಅವಶೇಷಿಸುವ ಸತ್ಕರ್ಮಗಳಾಗಿವೆ.
ಇನ್ನಷ್ಟು