عَنِ ابْنِ عُمَرَ رَضِيَ اللَّهُ عَنْهُمَا أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«لاَ يَنْظُرُ اللَّهُ إِلَى مَنْ جَرَّ ثَوْبَهُ خُيَلاَءَ».
[صحيح] - [متفق عليه] - [صحيح البخاري: 5783]
المزيــد ...
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಅಹಂಕಾರದಿಂದ ತನ್ನ ಉಡುಪನ್ನು (ನೆಲದಲ್ಲಿ) ಎಳೆಯುತ್ತಾನೋ ಅವನ ಕಡೆಗೆ ಅಲ್ಲಾಹು ನೋಡುವುದಿಲ್ಲ."
[صحيح] - [متفق عليه] - [صحيح البخاري - 5783]
ದರ್ಪದಿಂದ ಮತ್ತು ಅಹಂಕಾರದಿಂದ ತಮ್ಮ ಉಡುಪನ್ನು ಅಥವಾ ಧೋತಿಯನ್ನು ಹರಡುಗಂಟುಗಳ ಕೆಳಗೆ ಇಳಿಬಿಡುವುದರ ವಿರುದ್ಧ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ್ದಾರೆ. ಹಾಗೆ ಮಾಡಿದವನು ಪುನರುತ್ಥಾನ ದಿನದಂದು ಅಲ್ಲಾಹು ಕರುಣೆಯ ನೋಟದಿಂದ ಆತನನ್ನು ನೋಡುವುದಿಲ್ಲ ಎಂಬ ಉಗ್ರ ಎಚ್ಚರಿಕೆಗೆ ಅರ್ಹನಾಗುತ್ತಾನೆ.