+ -

عَنْ أَبِي مُوسَى الأَشْعَرِيِّ رضي الله عنه قَالَ:
أَتَيْتُ رَسُولَ اللَّهِ صَلَّى اللهُ عَلَيْهِ وَسَلَّمَ فِي رَهْطٍ مِنَ الأَشْعَرِيِّينَ أَسْتَحْمِلُهُ، فَقَالَ: «وَاللَّهِ لاَ أَحْمِلُكُمْ، مَا عِنْدِي مَا أَحْمِلُكُمْ» ثُمَّ لَبِثْنَا مَا شَاءَ اللَّهُ فَأُتِيَ بِإِبِلٍ، فَأَمَرَ لَنَا بِثَلاَثَةِ ذَوْدٍ، فَلَمَّا انْطَلَقْنَا قَالَ بَعْضُنَا لِبَعْضٍ: لاَ يُبَارِكُ اللَّهُ لَنَا، أَتَيْنَا رَسُولَ اللَّهِ صَلَّى اللهُ عَلَيْهِ وَسَلَّمَ نَسْتَحْمِلُهُ فَحَلَفَ أَنْ لاَ يَحْمِلَنَا فَحَمَلَنَا، فَقَالَ أَبُو مُوسَى: فَأَتَيْنَا النَّبِيَّ صَلَّى اللهُ عَلَيْهِ وَسَلَّمَ فَذَكَرْنَا ذَلِكَ لَهُ، فَقَالَ: «مَا أَنَا حَمَلْتُكُمْ، بَلِ اللَّهُ حَمَلَكُمْ، إِنِّي وَاللَّهِ -إِنْ شَاءَ اللَّهُ- لا أَحْلِفُ عَلَى يَمِينٍ، فَأَرَى غَيْرَهَا خَيْرًا مِنْهَا، إِلَّا كَفَّرْتُ عَنْ يَمِينِي، وَأَتَيْتُ الَّذِي هُوَ خَيْرٌ».

[صحيح] - [متفق عليه] - [صحيح البخاري: 6718]
المزيــد ...

ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
ನಾನು ಅಶ್‌ಅರಿಗಳಲ್ಲಿ ಸೇರಿದ ಕೆಲವು ಜನರೊಂದಿಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಸವಾರಿ ಮಾಡಲು ಏನಾದರೂ ನೀಡಬೇಕೆಂದು ವಿನಂತಿಸಿದೆ. ಅವರು ಹೇಳಿದರು: "ಅಲ್ಲಾಹನಾಣೆ! ನಿಮಗೆ ಸವಾರಿ ಮಾಡಲು ನಾನು ಏನೂ ನೀಡುವುದಿಲ್ಲ. ನನ್ನ ಬಳಿ ನೀವು ಸವಾರಿ ಮಾಡುವಂತದ್ದು ಏನೂ ಇಲ್ಲ." ನಂತರ, ಅಲ್ಲಾಹು ಇಚ್ಛಿಸಿದಷ್ಟು ಕಾಲ ನಾವು ಕಾದು ಕುಳಿತೆವು. ಆಗ ಅವರ ಬಳಿಗೆ ಕೆಲವು ಒಂಟೆಗಳನ್ನು ತರಲಾಯಿತು. ಅವರು ನಮಗೆ ಮೂರು ಒಂಟೆಗಳನ್ನು ನೀಡಲು ಆದೇಶಿಸಿದರು. ನಾವು ಅಲ್ಲಿಂದ ಹೊರಟಾಗ ನಾವು ಪರಸ್ಪರ ಹೇಳಿದೆವು: "ಅಲ್ಲಾಹು ನಮಗೆ ಸಮೃದ್ಧಿಯನ್ನು ನೀಡಲಾರ. ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಸವಾರಿ ಮಾಡಲು ಏನಾದರೂ ನೀಡಬೇಕೆಂದು ವಿನಂತಿಸಿದ್ದೆವು. ಆದರೆ ಅವರು ನಮಗೆ ಸವಾರಿ ಮಾಡಲು ಏನೂ ನೀಡುವುದಿಲ್ಲವೆಂದು ಆಣೆ ಮಾಡಿ, ನಂತರ ನಮಗೆ ಸವಾರಿ ಮಾಡಲು ನೀಡಿದರು." ಅಬೂ ಮೂಸಾ ಹೇಳಿದರು: ಆದ್ದರಿಂದ, ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋಗಿ ಅವರಿಗೆ ವಿಷಯವನ್ನು ತಿಳಿಸಿದೆವು. ಆಗ ಅವರು ಹೇಳಿದರು: "ನಿಮಗೆ ಸವಾರಿ ಮಾಡಲು ನೀಡಿದ್ದು ನಾನಲ್ಲ. ಬದಲಿಗೆ, ನಿಮಗೆ ಸವಾರಿ ಮಾಡಲು ನೀಡಿದ್ದು ಅಲ್ಲಾಹು. ನಿಶ್ಚಯವಾಗಿಯೂ, ಅಲ್ಲಾಹನಾಣೆ! ಅಲ್ಲಾಹು ಇಚ್ಛಿಸಿದರೆ, ನಾನು ಒಂದು ಕಾರ್ಯವನ್ನು ಮಾಡುತ್ತೇನೆಂದು ಪ್ರತಿಜ್ಞೆ ಮಾಡಿ, ನಂತರ ನನಗೆ ಇನ್ನೊಂದು ಕಾರ್ಯವು ಅದಕ್ಕಿಂತ ಉತ್ತಮವೆಂದು ಕಂಡರೆ, ನಾನು ನನ್ನ ಪ್ರತಿಜ್ಞೆಗೆ ಪರಿಹಾರ ನೀಡಿ, ಆ ಉತ್ತಮವಾದ ಕಾರ್ಯವನ್ನು ಮಾಡುತ್ತೇನೆ."

[صحيح] - [متفق عليه] - [صحيح البخاري - 6718]

ವಿವರಣೆ

ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಅವರು ಅವರ ಗೋತ್ರದ ಜನರೊಂದಿಗೆ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹೋದರು. ಅವರ ಉದ್ದೇಶವು ಅವರಿಗೆ ಧರ್ಮಯುದ್ಧದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಅವರಿಗೆ ಸವಾರಿ ಮಾಡಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಒಂಟೆಗಳನ್ನು ನೀಡಬೇಕು ಎಂಬುದಾಗಿತ್ತು. ಆದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಸವಾರಿ ಮಾಡಲು ಏನೂ ನೀಡುವುದಿಲ್ಲ ಮತ್ತು ತನ್ನ ಬಳಿ ಸವಾರಿ ಮಾಡವಂತದ್ದು ಏನೂ ಇಲ್ಲ ಎಂದು ಆಣೆ ಮಾಡಿ ಹೇಳಿದರು. ಅವರು ಅಲ್ಲಿಂದ ಹಿಂದಿರುಗಿ, ಸ್ವಲ್ಪ ಕಾಲ ಕಾದು ಕುಳಿತರು. ನಂತರ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಮೂರು ಒಂಟೆಗಳನ್ನು ತರಲಾಯಿತು. ಪ್ರವಾದಿಯವರು ಅವರನ್ನು ಕರೆಸಿದರು. ಆಗ ಅವರು ಪರಸ್ಪರ ಹೇಳಿದರು: "ಈ ಒಂಟೆಗಳಲ್ಲಿ ಅಲ್ಲಾಹು ನಮಗೆ ಸಮೃದ್ಧಿಯನ್ನು ದಯಪಾಲಿಸಲಾರ. ಏಕೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಸವಾರಿ ಮಾಡಲು ಏನೂ ನೀಡುವುದಿಲ್ಲವೆಂದು ಆಣೆ ಮಾಡಿದ್ದರು." ಆದ್ದರಿಂದ ಅವರು ಪ್ರವಾದಿಯವರ ಬಳಿಗೆ ಹೋಗಿ ವಿಚಾರಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮಗೆ ಸವಾರಿಯನ್ನು ನೀಡಿದ್ದು ಅಲ್ಲಾಹು. ಏಕೆಂದರೆ, ಆ ಒಂಟೆಗಳು ಇಲ್ಲಿಗೆ ಬರುವಂತೆ ಮಾಡಿ ಅವನು ನಿಮಗೆ ಅವುಗಳನ್ನು ಒದಗಿಸಿದ್ದಾನೆ. ನಾನು ಕೇವಲ ಒಂದು ಕಾರಣವಾಗಿದ್ದು ಅವನು ಅದನ್ನು ನನ್ನ ಕೈಯಿಂದ ಮಾಡಿಸಿದ್ದಾನೆ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ, ಅಲ್ಲಾಹನಾಣೆ! ಅಲ್ಲಾಹು ಇಚ್ಛಿಸಿದರೆ, ನಾನು ಯಾವುದಾದರೂ ಒಂದು ಕಾರ್ಯವನ್ನು ಮಾಡುತ್ತೇನೆಂದು ಅಥವಾ ಬಿಡುತ್ತೇನೆಂದು ಪ್ರತಿಜ್ಞೆ ಮಾಡಿ, ನಂತರ ಆ ಕಾರ್ಯಕ್ಕಿಂತಲೂ ಇನ್ನೊಂದು ಕಾರ್ಯವು ಉತ್ತಮ ಮತ್ತು ಶ್ರೇಷ್ಠವೆಂದು ನನಗೆ ಕಂಡರೆ, ನಾನು ಆ ಶ್ರೇಷ್ಠ ಕಾರ್ಯವನ್ನು ಮಾಡಿ ಈ ಕಾರ್ಯವನ್ನು ಬಿಟ್ಟುಬಿಡುತ್ತೇನೆ ಮತ್ತು ನನ್ನ ಪ್ರತಿಜ್ಞೆಯನ್ನು ಮುರಿದದ್ದಕ್ಕಾಗಿ ಪರಿಹಾರ ನೀಡುತ್ತೇನೆ."

ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية السويدية الأمهرية الهولندية الغوجاراتية القيرقيزية النيبالية الليتوانية الدرية الصربية الرومانية المالاجاشية الأورومو
ಅನುವಾದಗಳನ್ನು ತೋರಿಸಿ

ಹದೀಸಿನ ಪ್ರಯೋಜನಗಳು

  1. ಆಣೆ ಮಾಡುವಂತೆ ಯಾರೂ ವಿನಂತಿಸದಿದ್ದರೂ, ವಿಷಯವನ್ನು ಒತ್ತಿ ಹೇಳಲು ಆಣೆ ಮಾಡಬಹುದು. ಅದು ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದ್ದರೂ ಸಹ.
  2. ಪ್ರತಿಜ್ಞೆ ಮಾಡಿದ ನಂತರ "ಇನ್ ಶಾ ಅಲ್ಲಾಹ್" (ಅಲ್ಲಾಹು ಇಚ್ಛಿಸಿದರೆ) ಎಂದು ಹೇಳಲು ಅನುಮತಿಯಿದೆ. ಪ್ರತಿಜ್ಞೆ ಮಾಡುವಾಗಲೇ "ಇನ್ ಶಾ ಅಲ್ಲಾಹ್" ಹೇಳುವೆನೆಂದು ಸಂಕಲ್ಪ ಮಾಡಿದರೆ, ಮತ್ತು ಪ್ರತಿಜ್ಞೆಯೊಂದಿಗೆ ಅದನ್ನೂ ಹೇಳಿದರೆ, ಆ ಪ್ರತಿಜ್ಞೆಯನ್ನು ಮುರಿದದ್ದಕ್ಕಾಗಿ ಪರಿಹಾರ ನೀಡುವುದು ಕಡ್ಡಾಯವಲ್ಲ.
  3. ಆಣೆ ಮಾಡಿದ ಕಾರ್ಯಕ್ಕಿಂತಲೂ ಇನ್ನೊಂದು ಕಾರ್ಯವು ಉತ್ತಮವಾಗಿ ಕಂಡರೆ, ಆ ಆಣೆಗೆ ಪರಿಹಾರ ನೀಡಿ ಮುರಿಯುವುದನ್ನು ಪ್ರೋತ್ಸಾಹಿಸಲಾಗಿದೆ.