عَنْ سَهْلِ بْنِ سَعْدٍ رَضيَ اللهُ عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إِيَّاكُمْ وَمُحَقَّرَاتِ الذُّنُوبِ، فَإِنَّمَا مَثَلُ مُحَقَّرَاتِ الذُّنُوبِ كَقَوْمٍ نَزَلُوا فِي بَطْنِ وَادٍ، فَجَاءَ ذَا بِعُودٍ، وَجَاءَ ذَا بِعُودٍ، حَتَّى أَنْضَجُوا خُبْزَتَهُمْ، وَإِنَّ مُحَقَّرَاتِ الذُّنُوبِ مَتَى يُؤْخَذْ بِهَا صَاحِبُهَا تُهْلِكْهُ».
المزيد
ಸಹ್ಲ್ ಬಿನ್ ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನೀವು ತುಚ್ಚವಾಗಿ ಕಾಣುವ (ಚಿಕ್ಕದೆಂದು ಭಾವಿಸುವ) ಪಾಪಗಳ ಬಗ್ಗೆ ಎಚ್ಚರವಾಗಿರಿ. ಏಕೆಂದರೆ, ತುಚ್ಛವಾಗಿ ಕಾಣುವ ಪಾಪಗಳ ಉದಾಹರಣೆಯು ಒಂದು ಕಣಿವೆಯ ಒಳಭಾಗದಲ್ಲಿ ಇಳಿದುಕೊಂಡ ಒಂದು ಗುಂಪು ಜನರಂತಿದೆ. ಅವರಲ್ಲೊಬ್ಬನು ಒಂದು ಕಡ್ಡಿಯನ್ನು ತಂದನು, ಇನ್ನೊಬ್ಬನು ಒಂದು ಕಡ್ಡಿಯನ್ನು ತಂದನು. ಹೀಗೆ (ಕಡ್ಡಿಗಳನ್ನು ಸಂಗ್ರಹಿಸಿ) ಅವರು ತಮ್ಮ ರೊಟ್ಟಿಯನ್ನು ಬೇಯಿಸಿದರು. ಖಂಡಿತವಾಗಿಯೂ, ತುಚ್ಛವಾಗಿ ಕಾಣುವ ಪಾಪಗಳು, ಯಾವಾಗ ಅವುಗಳಿಗಾಗಿ ಮನುಷ್ಯನು ಹಿಡಿಯಲ್ಪಡುತ್ತಾನೋ (ವಿಚಾರಣೆಗೆ ಒಳಪಡುತ್ತಾನೋ), ಅವು ಅವನನ್ನು ನಾಶಮಾಡುತ್ತವೆ".