عَنْ عَمْرِو بْنِ الحَارِثِ خَتَنِ رَسُولِ اللَّهِ صَلَّى اللهُ عَلَيْهِ وَسَلَّمَ أَخِي أُمِّ المؤمِنين جُوَيْرِيَةَ بِنْتِ الحَارِثِ رَضِيَ اللَّهُ عَنْهُم، قَالَ:
مَا تَرَكَ رَسُولُ اللَّهِ صَلَّى اللهُ عَلَيْهِ وَسَلَّمَ عِنْدَ مَوْتِهِ دِرْهَمًا وَلاَ دِينَارًا وَلاَ عَبْدًا وَلاَ أَمَةً وَلاَ شَيْئًا، إِلَّا بَغْلَتَهُ البَيْضَاءَ، وَسِلاَحَهُ، وَأَرْضًا جَعَلَهَا صَدَقَةً.
[صحيح] - [رواه البخاري] - [صحيح البخاري: 2739]
المزيــد ...
ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಭಾವಮೈದುನ ಮತ್ತು ಉಮ್ಮುಲ್ ಮೂಮಿನೀನ್ ಜುವೈರಿಯಾ ಬಿಂತ್ ಅಲ್-ಹಾರಿಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಸಹೋದರರಾದ ಅಮ್ರ್ ಬಿನ್ ಅಲ್-ಹಾರಿಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದಿದಾಗ, (ತಮ್ಮ ಹಿಂದೆ) ಒಂದು ದಿರ್ಹಮ್ ಆಗಲಿ, ಒಂದು ದೀನಾರ್ ಆಗಲಿ, ಓರ್ವ ದಾಸನನ್ನಾಗಲಿ, ಓರ್ವ ದಾಸಿಯನ್ನಾಗಲಿ ಅಥವಾ ಬೇರೇನನ್ನೂ ಬಿಟ್ಟುಹೋಗಲಿಲ್ಲ. ಕೇವಲ ತಮ್ಮ ಬಿಳಿ ಹೇಸರಗತ್ತೆ, ತಮ್ಮ ಆಯುಧ ಮತ್ತು ತಾವು ದಾನವಾಗಿ ನೀಡಿದ ಒಂದು ಭೂಮಿಯನ್ನು ಹೊರತುಪಡಿಸಿ."
[صحيح] - [رواه البخاري] - [صحيح البخاري - 2739]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದಿದಾಗ, ಬೆಳ್ಳಿಯ ದಿರ್ಹಮ್ ಆಗಲಿ, ಚಿನ್ನದ ದೀನಾರ್ ಆಗಲಿ, ಮಾಲೀಕತ್ವದಲ್ಲಿದ್ದ ಗುಲಾಮನಾಗಲಿ, ಮಾಲೀಕತ್ವದಲ್ಲಿದ್ದ ದಾಸಿಯಾಗಲಿ, ಕುರಿಯಾಗಲಿ, ಒಂಟೆಯಾಗಲಿ ಅಥವಾ ಸಂಪತ್ತಿನ ರೂಪದಲ್ಲಿ ಬೇರೇನನ್ನೂ ಬಿಟ್ಟುಹೋಗಲಿಲ್ಲ. ಕೇವಲ ತಾವು ಸವಾರಿ ಮಾಡುತ್ತಿದ್ದ ಬಿಳಿ ಹೇಸರಗತ್ತೆ, ತಾವು (ಯುದ್ಧದಲ್ಲಿ) ಧರಿಸುತ್ತಿದ್ದ ಆಯುಧ ಮತ್ತು ತಾವು ಆರೋಗ್ಯವಾಗಿದ್ದಾಗಲೇ ಪ್ರಯಾಣಿಕರಿಗಾಗಿ 'ವಕ್ಫ್' (ದತ್ತಿ) ಮಾಡಿದ್ದ ಭೂಮಿಯನ್ನು ಹೊರತುಪಡಿಸಿ.