عَنِ النُّعْمَانِ بْنِ بَشِيرٍ رَضيَ اللهُ عنهُما:
أَنَّ أُمَّهُ بِنْتَ رَوَاحَةَ سَأَلَتْ أَبَاهُ بَعْضَ الْمَوْهِبَةِ مِنْ مَالِهِ لِابْنِهَا، فَالْتَوَى بِهَا سَنَةً ثُمَّ بَدَا لَهُ، فَقَالَتْ: لَا أَرْضَى حَتَّى تُشْهِدَ رَسُولَ اللهِ صَلَّى اللهُ عَلَيْهِ وَسَلَّمَ عَلَى مَا وَهَبْتَ لِابْنِي، فَأَخَذَ أَبِي بِيَدِي وَأَنَا يَوْمَئِذٍ غُلَامٌ، فَأَتَى رَسُولَ اللهِ صَلَّى اللهُ عَلَيْهِ وَسَلَّمَ، فَقَالَ: يَا رَسُولَ اللهِ، إِنَّ أُمَّ هَذَا بِنْتَ رَوَاحَةَ أَعْجَبَهَا أَنْ أُشْهِدَكَ عَلَى الَّذِي وَهَبْتُ لِابْنِهَا، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «يَا بَشِيرُ، أَلَكَ وَلَدٌ سِوَى هَذَا؟» قَالَ: نَعَمْ، فَقَالَ: «أَكُلَّهُمْ وَهَبْتَ لَهُ مِثْلَ هَذَا؟» قَالَ: لَا، قَالَ: «فَلَا تُشْهِدْنِي إِذن، فَإِنِّي لَا أَشْهَدُ عَلَى جَوْرٍ»، ولِمُسْلِمٍ: «فَأَشْهِدْ عَلَى هَذَا غَيْرِي».
[صحيح] - [متفق عليه، وله ألفاظ عديدة] - [صحيح مسلم: 1623]
المزيــد ...
ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ.
ಆತನ ತಾಯಿ (ಅಮ್ರಾ) ಬಿಂತ್ ರವಾಹ ಅವರು ಆತನ ತಂದೆ (ಬಶೀರ್) ಯ ಬಳಿ, ತನ್ನ ಮಗನಿಗಾಗಿ ಅವರ ಸಂಪತ್ತಿನಿಂದ ಸ್ವಲ್ಪ ಉಡುಗೊರೆಯನ್ನು ಕೇಳಿದರು. ತಂದೆಯು ಒಂದು ವರ್ಷದವರೆಗೆ ಅದನ್ನು ನೀಡಲು ಹಿಂಜರಿದರು. ನಂತರ ಅವರಿಗೆ (ಉಡುಗೊರೆ ನೀಡಲು) ಮನಸ್ಸಾಯಿತು. ಆಗ ತಾಯಿ ಹೇಳಿದರು: "ನನ್ನ ಮಗನಿಗೆ ನೀನು ನೀಡಿದ ಉಡುಗೊರೆಗೆ ಅಲ್ಲಾಹುವಿನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಾಕ್ಷಿಯಾಗಿರಿಸುವವರೆಗೆ ನಾನು ತೃಪ್ತಳಾಗುವುದಿಲ್ಲ". (ನುಅಮಾನ್ ಹೇಳುತ್ತಾರೆ) ಆಗ ನನ್ನ ತಂದೆ ನನ್ನ ಕೈ ಹಿಡಿದರು - ನಾನು ಆಗ ಒಬ್ಬ ಚಿಕ್ಕ ಬಾಲಕನಾಗಿದ್ದೆ - ಮತ್ತು ಅಲ್ಲಾಹುವಿನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ತಂದೆ ಹೇಳಿದರು: "ಓ ಅಲ್ಲಾಹುವಿನ ಸಂದೇಶವಾಹಕರೇ, ಈತನ ತಾಯಿ, ಬಿಂತ್ ರವಾಹ, ನಾನು ಅವಳ ಮಗನಿಗೆ ನೀಡಿದ ಉಡುಗೊರೆಗೆ ನಿಮ್ಮನ್ನು ಸಾಕ್ಷಿಯಾಗಿರಿಸಬೇಕೆಂದು ಇಷ್ಟಪಡುತ್ತಾರೆ". ಆಗ ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಬಶೀರ್, ನಿನಗೆ ಈತನಲ್ಲದೆ ಬೇರೆ ಮಕ್ಕಳಿದ್ದಾರೆಯೇ?". ಅವರು ಹೇಳಿದರು: "ಹೌದು". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನೀನು ಅವರೆಲ್ಲರಿಗೂ ಈತನಿಗೆ ನೀಡಿದಂತೆಯೇ ನೀಡಿದ್ದೀಯಾ?". ಅವರು ಹೇಳಿದರು: "ಇಲ್ಲ". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಾಗಾದರೆ ನನ್ನನ್ನು ಸಾಕ್ಷಿಯಾಗಿಡಬೇಡ, ಏಕೆಂದರೆ ನಾನು ಅನ್ಯಾಯಕ್ಕೆ ಸಾಕ್ಷಿಯಾಗುವುದಿಲ್ಲ". ಇಮಾಮ್ ಮುಸ್ಲಿಂ ಅವರ ವರದಿಯಲ್ಲಿ (ಹೆಚ್ಚುವರಿಯಾಗಿ) ಹೀಗಿದೆ: (ಪ್ರವಾದಿಯವರು ಹೇಳಿದರು) "ಇದಕ್ಕೆ ನನ್ನ ಬದಲಿಗೆ ಬೇರೆಯವರನ್ನು ಸಾಕ್ಷಿಯಾಗಿರಿಸು".
[صحيح] - [متفق عليه، وله ألفاظ عديدة] - [صحيح مسلم - 1623]
ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಅವರ ತಾಯಿ ಅಮ್ರಾ ಬಿಂತ್ ರವಾಹ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಮ್ಮ ಮಗನಿಗಾಗಿ ಅವರ ತಂದೆಯ ಬಳಿ ಅವರ ಸಂಪತ್ತಿನಿಂದ ಸ್ವಲ್ಪ ಉಡುಗೊರೆಯನ್ನು ಕೇಳಿದರು. ತಂದೆಯು ಹಿಂಜರಿದರು ಮತ್ತು ಒಂದು ವರ್ಷದವರೆಗೆ ಅದನ್ನು ಮುಂದೂಡಿದರು. ನಂತರ, ಆಕೆಯ ಕೋರಿಕೆಗೆ ಸ್ಪಂದಿಸಿ ತಮ್ಮ ಮಗ ನುಅಮಾನ್‌ಗೆ ಉಡುಗೊರೆ ನೀಡಲು ಅವರಿಗೆ ಮನಸ್ಸಾಯಿತು. ಆಗ ತಾಯಿ ಹೇಳಿದರು: ನೀವು ನನ್ನ ಮಗನಿಗೆ ನೀಡಿದ ಉಡುಗೊರೆಗೆ ಅಲ್ಲಾಹುವಿನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಾಕ್ಷಿಯಾಗಿರಿಸುವವರೆಗೆ ನಾನು ತೃಪ್ತಳಾಗುವುದಿಲ್ಲ. ಆಗ ನನ್ನ ತಂದೆ ನನ್ನ ಕೈ ಹಿಡಿದರು - ನಾನು ಅಂದು ಒಬ್ಬ ಚಿಕ್ಕ ಬಾಲಕನಾಗಿದ್ದೆ - ಮತ್ತು ಅಲ್ಲಾಹುವಿನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ತಂದೆ ಹೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ಈತನ ತಾಯಿ, ಬಿಂತ್ ರವಾಹ, ನಾನು ಅವಳ ಮಗನಿಗೆ ನೀಡಿದ ಉಡುಗೊರೆಗೆ ನಿಮ್ಮನ್ನು ಸಾಕ್ಷಿಯಾಗಿರಿಸಬೇಕೆಂದು ಇಷ್ಟಪಡುತ್ತಾರೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: ಓ ಬಶೀರ್, ನಿನಗೆ ಈತನಲ್ಲದೆ ಬೇರೆ ಮಕ್ಕಳಿದ್ದಾರೆಯೇ? ಅವರು ಹೇಳಿದರು: ಹೌದು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: ನೀನು ಅವರೆಲ್ಲರಿಗೂ ಈತನಿಗೆ ನೀಡಿದಂತೆಯೇ ನೀಡಿದ್ದೀಯಾ? ಅವರು ಹೇಳಿದರು: ಇಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಹಾಗಾದರೆ ನನ್ನನ್ನು ಸಾಕ್ಷಿಯಾಗಿಡಬೇಡ. ಏಕೆಂದರೆ ನಾನು ಅನ್ಯಾಯ ಮತ್ತು ದಬ್ಬಾಳಿಕೆಗೆ ಸಾಕ್ಷಿಯಾಗುವುದಿಲ್ಲ. ಇಮಾಮ್ ಮುಸ್ಲಿಂ ಅವರ ವರದಿಯಲ್ಲಿರುವಂತೆ, ಅವರನ್ನು ಗದರಿಸುತ್ತಾ ಹೇಳಿದರು: ಹಾಗಾದರೆ ಈ ಅನ್ಯಾಯಕ್ಕೆ ನನ್ನ ಬದಲಿಗೆ ಬೇರೆಯವರನ್ನು ಸಾಕ್ಷಿಯಾಗಿರಿಸು.