عَنْ عُمَرَ بْنِ الخَطَّابِ رَضِيَ اللَّهُ عَنْهُ:
أَنَّ رَجُلًا عَلَى عَهْدِ النَّبِيِّ صَلَّى اللهُ عَلَيْهِ وَسَلَّمَ كَانَ اسْمُهُ عَبْدَ اللَّهِ، وَكَانَ يُلَقَّبُ حِمَارًا، وَكَانَ يُضْحِكُ رَسُولَ اللَّهِ صَلَّى اللهُ عَلَيْهِ وَسَلَّمَ، وَكَانَ النَّبِيُّ صَلَّى اللهُ عَلَيْهِ وَسَلَّمَ قَدْ جَلَدَهُ فِي الشَّرَابِ، فَأُتِيَ بِهِ يَوْمًا فَأَمَرَ بِهِ فَجُلِدَ، فَقَالَ رَجُلٌ مِنَ القَوْمِ: اللَّهُمَّ الْعَنْهُ، مَا أَكْثَرَ مَا يُؤْتَى بِهِ؟ فَقَالَ النَّبِيُّ صَلَّى اللهُ عَلَيْهِ وَسَلَّمَ: «لاَ تَلْعَنُوهُ، فَوَاللَّهِ مَا عَلِمْتُ أَنَّهُ يُحِبُّ اللَّهَ وَرَسُولَهُ».
[صحيح] - [رواه البخاري] - [صحيح البخاري: 6780]
المزيــد ...
ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ:
"ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಒಬ್ಬ ವ್ಯಕ್ತಿಯಿದ್ದನು. ಅವನ ಹೆಸರು ಅಬ್ದುಲ್ಲಾ ಆಗಿತ್ತು ಮತ್ತು ಅವನಿಗೆ 'ಹಿಮಾರ್' (ಕತ್ತೆ) ಎಂಬ ಅಡ್ಡಹೆಸರಿತ್ತು. ಅವನು ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಗಿಸುತ್ತಿದ್ದನು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನಿಗೆ ಮದ್ಯಪಾನ ಮಾಡಿದ್ದಕ್ಕಾಗಿ (ಹಿಂದೆ) ಚಾವಟಿ ಏಟಿನ ಶಿಕ್ಷೆ ವಿಧಿಸಿದ್ದರು. ಒಂದು ದಿನ ಅವನನ್ನು (ಮತ್ತೆ ಮದ್ಯಪಾನ ಮಾಡಿದ ಸ್ಥಿತಿಯಲ್ಲಿ) ತರಲಾಯಿತು. ಆಗ ಅವರು ಆದೇಶ ನೀಡಿದರು ಮತ್ತು ಅವನಿಗೆ ಚಾವಟಿ ಏಟಿನ ಶಿಕ್ಷೆ ನೀಡಲಾಯಿತು. ಆಗ ಜನರಲ್ಲಿ ಒಬ್ಬ ವ್ಯಕ್ತಿ: 'ಅಲ್ಲಾಹನೇ, ಇವನನ್ನು ಶಪಿಸು! ಎಷ್ಟೊಂದು ಬಾರಿ ಇವನನ್ನು (ಇದೇ ತಪ್ಪಿಗಾಗಿ) ತರಲಾಗುತ್ತದೆ?' ಎಂದು ಹೇಳಿದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: 'ಅವನನ್ನು ಶಪಿಸಬೇಡಿ. ಅಲ್ಲಾಹನ ಆಣೆ, ಅವನು ಅಲ್ಲಾಹು ಮತ್ತು ಅವನ ರಸೂಲರನ್ನು ಪ್ರೀತಿಸುತ್ತಾನೆ ಎಂಬುದು ನನಗೆ ತಿಳಿದಿದೆ'."
[صحيح] - [رواه البخاري] - [صحيح البخاري - 6780]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಅಬ್ದುಲ್ಲಾ ಎಂಬ ಹೆಸರಿನ ಒಬ್ಬ ವ್ಯಕ್ತಿಯಿದ್ದನು. ಅವನಿಗೆ 'ಹಿಮಾರ್' ಎಂದು ಕರೆಯಲಾಗುತ್ತಿತ್ತು. ಅವನು ತನ್ನ ಕೆಲವು ಮಾತುಗಳಿಂದ ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಗಿಸುತ್ತಿದ್ದನು. ಪ್ರವಾದಿಯವರು ಹಿಂದೆ ಅವನಿಗೆ ಮದ್ಯಪಾನ ಮಾಡಿದ್ದಕ್ಕಾಗಿ ಚಾವಟಿ ಏಟಿನ ಶಿಕ್ಷೆ ನೀಡಿದ್ದರು. ಒಂದು ದಿನ ಅವನು ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಮತ್ತೆ ಕರೆತರಲ್ಪಟ್ಟನು. ಆಗ ಅವನಿಗೆ ಚಾವಟಿ ಏಟು ನೀಡುವಂತೆ ಆದೇಶಿಸಲಾಯಿತು. ಅಲ್ಲಿ ಹಾಜರಿದ್ದ ಒಬ್ಬ ವ್ಯಕ್ತಿ ಅವನನ್ನು ಬೈದರು ಮತ್ತು "ಅಲ್ಲಾಹು ಇವನನ್ನು ಶಪಿಸಲಿ! ಮದ್ಯಪಾನ ಮಾಡಿದ್ದಕ್ಕಾಗಿ ಇವನನ್ನು ಎಷ್ಟು ಬಾರಿ ತರಲಾಗುತ್ತದೆ?!" ಎಂದು ಹೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನು ಅಲ್ಲಾಹನ ಕರುಣೆಯಿಂದ ದೂರವಾಗಲಿ ಎಂದು ಪ್ರಾರ್ಥಿಸಬೇಡಿ (ಶಪಿಸಬೇಡಿ). ಅಲ್ಲಾಹನ ಆಣೆ, ನನಗೆ ತಿಳಿದಿರುವುದೇನೆಂದರೆ, ಅವನು ಅಲ್ಲಾಹು ಮತ್ತು ಅವನ ರಸೂಲರನ್ನು ಪ್ರೀತಿಸುತ್ತಾನೆ."