عَنْ عُبَيْدِ اللَّهِ بْنِ عَدِيِّ بْنِ الخِيَارِ قَالَ:
أَخْبَرَنِي رَجُلَانِ أَنَّهُمَا أَتَيَا النَّبِيَّ صَلَّى اللهُ عَلَيْهِ وَسَلَّمَ فِي حَجَّةِ الوَدَاعِ وَهُوَ يُقَسِّمُ الصَّدَقَةَ، فَسَأَلَاهُ مِنْهَا، فَرَفَّعَ فِينَا البَصَرَ وَخَفَّضَهُ، فَرَآنَا جَلْدَيْنِ، فَقَالَ: «إِنَّ شِئْتُمَا أَعْطَيْتُكُمَا، وَلَا حَظَّ فِيهَا لِغَنِيٍّ، وَلَا لِقَوِيٍّ مُكْتَسِبٍ».
[صحيح] - [رواه أبو داود والنسائي] - [سنن أبي داود: 1633]
المزيــد ...
ಉಬೈದುಲ್ಲಾ ಬಿನ್ ಅದೀ ಬಿನ್ ಅಲ್-ಖಿಯಾರ್ ರಿಂದ ವರದಿ: ಅವರು ಹೇಳಿದರು:
"ಇಬ್ಬರು ವ್ಯಕ್ತಿಗಳು ನನಗೆ ತಿಳಿಸಿದ್ದೇನೆಂದರೆ, ಅವರು ಹಜ್ಜತುಲ್ ವಿದಾಅ್ (ವಿದಾಯದ ಹಜ್ಜ್) ಸಂದರ್ಭದಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಆಗ ಪ್ರವಾದಿಯವರು ಸದಕಾವನ್ನು (ದಾನವನ್ನು) ಹಂಚುತ್ತಿದ್ದರು. ಅವರು (ಆ ಇಬ್ಬರು) ಅದರಿಂದ ತಮಗೂ ನೀಡುವಂತೆ ಕೇಳಿದರು. ಆಗ ಅವರು (ಪ್ರವಾದಿ) ನಮ್ಮ ಕಡೆಗೆ ದೃಷ್ಟಿಯನ್ನು ಏರಿಸಿ ಮತ್ತು ತಗ್ಗಿಸಿ (ಪರಿಶೀಲಿಸಿ) ನೋಡಿದರು ಮತ್ತು ನಮ್ಮನ್ನು ದೃಢಕಾಯರು ಎಂದು ಕಂಡರು. ಆಗ ಅವರು ಹೇಳಿದರು: “ನೀವು ಇಚ್ಚಿಸುವುದಾದರೆ ನಾನು ನಿಮಗೆ ನೀಡುತ್ತೇನೆ. (ಆದರೆ) ಇದರಲ್ಲಿ ಶ್ರೀಮಂತನಿಗೆ ಅಥವಾ ದುಡಿಯಲು ಶಕ್ತನಾಗಿರುವ ಬಲಿಷ್ಠನಿಗೆ ಯಾವುದೇ ಪಾಲಿಲ್ಲ."
[صحيح] - [رواه أبو داود والنسائي] - [سنن أبي داود - 1633]
ಹಜ್ಜತುಲ್ ವಿದಾಅ್ (ವಿದಾಯದ ಹಜ್) ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಆಗ ಅವರು ಸದಕಾವನ್ನು ಹಂಚುತ್ತಿದ್ದರು. ಆ ಇಬ್ಬರು ತಮಗೂ ಅದರಿಂದ ನೀಡಬೇಕೆಂದು ಕೇಳಿಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಸ್ಥಿತಿಯನ್ನು ತಿಳಿಯಲು ಮತ್ತು ಅವರಿಗೆ ಸದಕಾ ಪಡೆಯುವುದು ಧರ್ಮಸಮ್ಮತವೇ (ಹಲಾಲ್) ಅಥವಾ ಅಲ್ಲವೇ ಎಂಬುದನ್ನು ತಿಳಿಯಲು ಅವರನ್ನು ಮತ್ತೆ ಮತ್ತೆ (ಮೇಲಿನಿಂದ ಕೆಳಗಿನವರೆಗೆ) ನೋಡಿದರು. ಅವರು ಅವರಿಬ್ಬರನ್ನೂ ಬಲಿಷ್ಠ ವ್ಯಕ್ತಿಗಳೆಂದು ಕಂಡುಕೊಂಡರು. ಆಗ ಅವರು ಹೇಳಿದರು: "ನೀವು ಬಯಸುವುದಾದರೆ ನಾನು ನಿಮಗೆ ಸದಕಾದಿಂದ ನೀಡುತ್ತೇನೆ. (ಆದರೆ) ಯಾರ ಬಳಿ ತನಗೆ ಸಾಕಾಗುವಷ್ಟು ಸಂಪತ್ತಿದೆಯೋ ಅವನಿಗೆ ಇದರಲ್ಲಿ ಪಾಲಿಲ್ಲ. ಮತ್ತು ದುಡಿದು ಸಂಪಾದಿಸಲು ಶಕ್ತನಾಗಿರುವವನಿಗೂ ಇದರಲ್ಲಿ ಪಾಲಿಲ್ಲ; ಅವನ ಬಳಿ ತಾನು ಶ್ರೀಮಂತನೆನಿಸುವಷ್ಟು ಸಂಪತ್ತು ಇಲ್ಲದಿದ್ದರೂ ಸರಿ."