عَنْ عَبْدِ اللهِ بْنِ عَنَمَةَ، قَالَ:
رَأَيْتُ عَمَّارَ بْنَ يَاسِرٍ دَخَلَ المَسْجِدَ فَصَلَّى، ‌فَأَخَفَّ ‌الصَّلَاةَ، قَالَ: فَلَمَّا خَرَجَ، قُمْتُ إِلَيْهِ، فَقُلْتُ: يَا أَبَا اليَقْظَانِ، لَقَدْ خَفَّفْتَ، قَالَ: فَهَلْ رَأَيْتَنِي انْتَقَصْتُ مِنْ حُدُودِهَا شَيْئًا؟! قُلْتُ: لَا، قَالَ: فَإِنِّي بَادَرْتُ بِهَا سَهْوَةَ الشَّيْطَانِ، سَمِعْتُ رَسُولَ اللهِ صلى الله عليه وسلم يَقُولُ: « إِنَّ الْعَبْدَ لَيُصَلِّي الصَّلَاةَ، مَا يُكْتَبُ لَهُ مِنْهَا إِلَّا عُشْرُهَا، تُسْعُهَا، ثُمُنُهَا، سُبُعُهَا، سُدُسُهَا، خُمُسُهَا، رُبُعُهَا، ثُلُثُهَا نِصْفُهَا».

[حسن] - [رواه أحمد] - [مسند أحمد: 18894]
المزيــد ...

ಅಬ್ದುಲ್ಲಾ ಬಿನ್ ಅನಮ ರಿಂದ ವರದಿ: ಅವರು ಹೇಳಿದರು:
"ನಾನು ಅಮ್ಮಾರ್ ಬಿನ್ ಯಾಸಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ನೋಡಿದೆನು. ಅವರು ಮಸೀದಿಯನ್ನು ಪ್ರವೇಶಿಸಿ ನಮಾಝ್ ಮಾಡಿದರು ಮತ್ತು ನಮಾಝನ್ನು ಹಗುರಗೊಳಿಸಿದರು (ಬೇಗ ಮುಗಿಸಿದರು). ವರದಿಗಾರರು (ಅಬ್ದುಲ್ಲಾ) ಹೇಳಿದರು: ಅವರು (ಮಸೀದಿಯಿಂದ) ಹೊರಬಂದಾಗ, ನಾನು ಅವರ ಬಳಿಗೆ ಹೋಗಿ ಹೇಳಿದೆನು: 'ಓ ಅಬುಲ್-ಯಕ್ದಾನ್, ನೀವು (ನಮಾಝನ್ನು) ಬಹಳ ಹಗುರಗೊಳಿಸಿದಿರಲ್ಲ!'. ಅವರು (ಅಮ್ಮಾರ್) ಕೇಳಿದರು: 'ನಾನು ಅದರ (ನಮಾಝಿನ) ಯಾವುದೇ ಮಿತಿಗಳಲ್ಲಿ (ನಿಯಮಗಳಲ್ಲಿ) ಏನನ್ನಾದರೂ ಕಡಿಮೆ ಮಾಡಿದ್ದನ್ನು ನೀವು ನೋಡಿದಿರಾ?' ನಾನು ಹೇಳಿದೆನು: 'ಇಲ್ಲ'. ಅವರು ಹೇಳಿದರು: 'ಖಂಡಿತವಾಗಿಯೂ ನಾನು ಶೈತಾನನು ಉಂಟುಮಾಡುವ ಮರೆವು (ಅಥವಾ ಅಜಾಗರೂಕತೆ) ಬರುವ ಮುನ್ನವೇ ಅದನ್ನು (ಬೇಗನೆ) ನಿರ್ವಹಿಸಿದೆನು. ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ್ದೇನೆ: “ಖಂಡಿತವಾಗಿಯೂ ಓರ್ವ ದಾಸನು ನಮಾಝ್ ಮಾಡುತ್ತಾನೆ, ಆದರೆ ಅವನಿಗೆ ಅದರಲ್ಲಿ ಹತ್ತನೇ ಒಂದು ಭಾಗ, ಒಂಬತ್ತನೇ ಒಂದು ಭಾಗ, ಎಂಟನೇ ಒಂದು ಭಾಗ, ಏಳನೇ ಒಂದು ಭಾಗ, ಆರನೇ ಒಂದು ಭಾಗ, ಐದನೇ ಒಂದು ಭಾಗ, ನಾಲ್ಕನೇ ಒಂದು ಭಾಗ, ಮೂರನೇ ಒಂದು ಭಾಗ ಅಥವಾ ಅರ್ಧದಷ್ಟು (ಪ್ರತಿಫಲ) ಮಾತ್ರ ಬರೆಯಲ್ಪಡುತ್ತದೆ'."

[حسن] - [رواه أحمد] - [مسند أحمد - 18894]

ವಿವರಣೆ

ಅಮ್ಮಾರ್ ಬಿನ್ ಯಾಸಿರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಮಸೀದಿಯನ್ನು ಪ್ರವೇಶಿಸಿ ನಫಿಲ್ (ಐಚ್ಛಿಕ) ನಮಾಝ್ ನಿರ್ವಹಿಸಿದರು. ಅದು ಹಗುರವಾದ (ಸಣ್ಣ) ನಮಾಝ್ ಆಗಿತ್ತು. ಅವರು ಮಸೀದಿಯಿಂದ ಹೊರಬಂದಾಗ, ಅಬ್ದುಲ್ಲಾ ಬಿನ್ ಅನಮ ಅವರನ್ನು ಹಿಂಬಾಲಿಸಿದರು ಮತ್ತು ಅವರಿಗೆ ಹೇಳಿದರು: "ಓ ಅಬುಲ್-ಯಕ್ದಾನ್, ನೀವು ನಿಮ್ಮ ನಮಾಝನ್ನು ಹಗುರಗೊಳಿಸಿದ್ದನ್ನು (ಬೇಗ ಮುಗಿಸಿದ್ದನ್ನು) ನಾನು ನೋಡಿದೆನು!" ಅಮ್ಮಾರ್ ಹೇಳಿದರು: "ಅದರ 'ಅರ್ಕಾನ್' (ಸ್ತಂಭಗಳು), 'ವಾಜಿಬಾತ್' (ಕಡ್ಡಾಯಗಳು) ಅಥವಾ 'ಶುರೂತ್' (ಷರತ್ತು) ಗಳಲ್ಲಿ ನಾನು ಏನನ್ನಾದರೂ ಕಡಿಮೆ ಮಾಡಿದ್ದನ್ನು ನೀವು ನೋಡಿದಿರಾ?!". ಅವರು (ಅಬ್ದುಲ್ಲಾ) ಹೇಳಿದರು: "ಇಲ್ಲ". ಆಗ ಅಮ್ಮಾರ್ ಹೇಳಿದರು: "ಶೈತಾನನು ನನ್ನನ್ನು (ಬೇರೆ ಆಲೋಚನೆಗಳಲ್ಲಿ) ಮಗ್ನಗೊಳಿಸುವ ಮುನ್ನವೇ ನಾನು ಅದನ್ನು ಮುಗಿಸಿದೆನು. ನಾನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದನ್ನು ಕೇಳಿದ್ದೇನೆ: ಖಂಡಿತವಾಗಿಯೂ ಓರ್ವ ದಾಸನು ನಮಾಝ್ ಮಾಡುತ್ತಾನೆ, ಆದರೆ ಅವನಿಗೆ ಅದರ ಪ್ರತಿಫಲದಲ್ಲಿ ಹತ್ತನೇ ಒಂದು ಭಾಗ, ಅಥವಾ ಒಂಬತ್ತನೇ ಒಂದು ಭಾಗ, ಅಥವಾ ಎಂಟನೇ ಒಂದು ಭಾಗ, ಅಥವಾ ಏಳನೇ ಒಂದು ಭಾಗ, ಅಥವಾ ಆರನೇ ಒಂದು ಭಾಗ, ಅಥವಾ ಐದನೇ ಒಂದು ಭಾಗ, ಅಥವಾ ನಾಲ್ಕನೇ ಒಂದು ಭಾಗ, ಅಥವಾ ಮೂರನೇ ಒಂದು ಭಾಗ, ಅಥವಾ ಅರ್ಧದಷ್ಟು ಮಾತ್ರ ಬರೆಯಲ್ಪಡುತ್ತದೆ."

ಹದೀಸಿನ ಪ್ರಯೋಜನಗಳು

  1. ಸಲಫ್‌ಗಳು (ಪೂರ್ವಿಕರು) ಪರಸ್ಪರ ನಸೀಹತ್ (ಉಪದೇಶ) ನೀಡುವುದರಲ್ಲಿ ಆಸಕ್ತಿ ಹೊಂದಿದ್ದರು.
  2. ಆಕ್ಷೇಪಿಸುವ ಮೊದಲು ಖಚಿತಪಡಿಸಿಕೊಳ್ಳುವುದು ಮತ್ತು ಪ್ರಶ್ನಿಸುವುದು ಅಗತ್ಯವಾಗಿದೆ.
  3. ಪ್ರಶ್ನೆಗೆ ಮತ್ತು ಗೊಂದಲಕ್ಕೆ ಉತ್ತರಿಸುವಾಗ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತನ್ನು ಪುರಾವೆಯಾಗಿ ನೀಡಬೇಕು.
  4. ನಮಾಝಿನಲ್ಲಿ ಏಕಾಗ್ರತೆ ಮತ್ತು ಚಿಂತನೆ ಕಡಿಮೆಯಾದಂತೆ, ನಮಾಝಿನ ಪ್ರತಿಫಲವೂ ಕಡಿಮೆಯಾಗುತ್ತದೆ.
  5. ನಮಾಝಿನಲ್ಲಿ ಏಕಾಗ್ರತೆ ಮತ್ತು ಅಲ್ಲಾಹನೊಂದಿಗೆ ಮನಸ್ಸನ್ನು ಹಾಜರುಪಡಿಸಿಕೊಳ್ಳುವ ಬಗ್ಗೆ ಇರುವ ದೃಢವಾದ ಮತ್ತು ಬಲವಾದ ಪ್ರೇರಣೆ ಇದರಲ್ಲಿದೆ.
ಅನುವಾದಗಳನ್ನು ತೋರಿಸಿ
ಭಾಷೆ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಇನ್ನಷ್ಟು (25)
ಇನ್ನಷ್ಟು