عَنْ أَبِي الدَّرْدَاءِ رَضِيَ اللَّهُ عَنْهُ قَالَ: قَالَ رَسُولُ اللهِ صَلَّى اللَّهُ عَلَيْهِ وَسَلَّمَ:
«أَلاَ أُخْبِرُكُمْ بِأَفْضَلَ مِنْ دَرَجَةِ الصِّيَامِ وَالصَّلاَةِ وَالصَّدَقَةِ؟» قَالُوا: بَلَى، قَالَ: «صَلاَحُ ذَاتِ البَيْنِ، فَإِنَّ فَسَادَ ذَاتِ البَيْنِ هِيَ الحَالِقَةُ».
[صحيح] - [رواه أبو داود والترمذي] - [سنن الترمذي: 2509]
المزيــد ...
ಅಬೂ ದರ್ದಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಮಾಝ್, ಉಪವಾಸ ಮತ್ತು ದಾನಧರ್ಮಗಳ ಪದವಿಗಿಂತಲೂ ಉತ್ತಮವಾದುದನ್ನು ನಾನು ನಿಮಗೆ ತಿಳಿಸಿಕೊಡಲೇ?" ಅವರು (ಸಹಾಬಾಗಳು) ಹೇಳಿದರು: "ಖಂಡಿತ (ತಿಳಿಸಿಕೊಡಿ)." ಅವರು (ಪ್ರವಾದಿ) ಹೇಳಿದರು: "ಜನರ ನಡುವೆ ಇರುವ ಸಂಬಂಧವನ್ನು ಸರಿಪಡಿಸುವುದು. ಏಕೆಂದರೆ, ಪರಸ್ಪರ ಸಂಬಂಧಗಳು ಹದಗೆಡುವುದು (ಧರ್ಮವನ್ನು) ಬೋಳಿಸುವಂತಹ (ನಾಶಮಾಡುವ) ಕೃತ್ಯವಾಗಿದೆ."
[صحيح] - [رواه أبو داود والترمذي] - [سنن الترمذي - 2509]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಾಗಳಲ್ಲಿ, "ಐಚ್ಛಿಕ (ನಫಿಲ್) ಉಪವಾಸ, ನಮಾಝ್ ಮತ್ತು ದಾನಗಳನ್ನು ಹೆಚ್ಚಾಗಿ ಮಾಡುವುದರಿಂದ ಸಿಗುವ ಪ್ರತಿಫಲಕ್ಕಿಂತಲೂ ಉತ್ತಮವಾದ ಕಾರ್ಯವನ್ನು ನಾನು ನಿಮಗೆ ತಿಳಿಸಿಕೊಡಲೇ?" ಎಂದು ಪ್ರಶ್ನಿಸಿದರು. ಅವರು (ಸಹಾಬಾಗಳು): "ಹೌದು" ಎಂದರು. ಆಗ ಅವರು ಹೇಳಿದರು: "ಜಗಳವಾಡುತ್ತಿರುವವರ ನಡುವೆ ರಾಜಿ ಮಾಡಿಸುವುದು. ಏಕೆಂದರೆ ಜಗಳವು ಜನರ ನಡುವೆ ವಿಭಜನೆ, ಒಂಟಿತನ, ದ್ವೇಷ ಮತ್ತು ಒಬ್ಬರಿಗೊಬ್ಬರು ಬೆನ್ನು ತಿರುಗಿಸುವುದನ್ನು ಉಂಟುಮಾಡುತ್ತದೆ. ಜನರ ಸಂಬಂಧಗಳು ಹದಗೆಡುವುದರಿಂದ ದ್ವೇಷ ಹುಟ್ಟುತ್ತದೆ. ಕ್ಷೌರದ ಕತ್ತಿಯು ಕೂದಲನ್ನು ಬುಡಸಹಿತ ಬೋಳಿಸುವಂತೆ, ಈ ದ್ವೇಷವು ಧರ್ಮ ಮತ್ತು ಪ್ರಾಪಂಚಿಕ ಜೀವನವನ್ನು ಬುಡಸಹಿತ ನಾಶಮಾಡುವ ಗುಣವನ್ನು ಹೊಂದಿದೆ."