عَنْ أبي سَلَمَةَ بْنِ عَبْدِ الرَّحْمَنِ أَنَّ جَابِرَ بْنَ عَبْدِ اللَّهِ الأَنْصَارِيِّ رَضِيَ اللَّهُ عَنْهُمَا قَالَ: وَهُوَ يُحَدِّثُ عَنْ فَتْرَةِ الوَحْيِ، فَقَالَ فِي حَدِيثِهِ:
«بَيْنَا أَنَا أَمْشِي إِذْ سَمِعْتُ صَوْتًا مِنَ السَّمَاءِ، فَرَفَعْتُ بَصَرِي، فَإِذَا المَلَكُ الَّذِي جَاءَنِي بِحِرَاءٍ جَالِسٌ عَلَى كُرْسِيٍّ بَيْنَ السَّمَاءِ وَالأَرْضِ، فَرُعِبْتُ مِنْهُ، فَرَجَعْتُ فَقُلْتُ: زَمِّلُونِي، فَأَنْزَلَ اللَّهُ تَعَالَى: {يَا أَيُّهَا المُدَّثِّرُ1 قُمْ فَأَنْذِرْ} [المدثر: 2] إِلَى قَوْلِهِ {وَالرُّجْزَ فَاهْجُرْ} [المدثر: 5]. فَحَمِيَ الوَحْيُ وَتَتَابَعَ».
[صحيح] - [متفق عليه] - [صحيح البخاري: 4]
المزيــد ...
ಅಬೂ ಸಲಾಮ ಇಬ್ನ್ ಅಬ್ದುರ್ರಹ್ಮಾನ್ ರಿಂದ ವರದಿ: ಜಾಬಿರ್ ಇಬ್ನ್ ಅಬ್ದುಲ್ಲಾ ಅಲ್-ಅನ್ಸಾರಿ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು 'ವಹೀ' (ದಿವ್ಯವಾಣಿ) ಸ್ಥಗಿತಗೊಂಡಿದ್ದ ಅವಧಿಯ ಬಗ್ಗೆ ಮಾತನಾಡುತ್ತಾ, ತಮ್ಮ ಹದೀಸ್‌ನಲ್ಲಿ ಹೀಗೆ ಹೇಳಿದರು:
"ನಾನು ನಡೆಯುತ್ತಿದ್ದಾಗ ಆಕಾಶದಿಂದ ಒಂದು ಧ್ವನಿಯನ್ನು ಕೇಳಿದೆನು. ನಾನು ನನ್ನ ದೃಷ್ಟಿಯನ್ನು ಮೇಲಕ್ಕೆತ್ತಿದೆನು. ಆಗ, ಹಿರಾ ಗುಹೆಯಲ್ಲಿ ನನ್ನ ಬಳಿಗೆ ಬಂದಿದ್ದ ಅದೇ ಮಲಕ್ (ದೇವದೂತ ಜಿಬ್ರೀಲ್), ಆಕಾಶ ಮತ್ತು ಭೂಮಿಯ ನಡುವೆ ಕುರ್ಸಿಯ (ಆಸನದ) ಮೇಲೆ ಕುಳಿತಿದ್ದರು. ಅವರನ್ನು ಕಂಡು ನಾನು ಭಯಭೀತನಾದೆನು. ನಾನು (ಮನೆಗೆ) ಮರಳಿ, 'ನನ್ನನ್ನು ಹೊದಿಸಿರಿ' ಎಂದು ಹೇಳಿದೆನು. ಆಗ ಅಲ್ಲಾಹು: “ಓ ಹೊದ್ದುಕೊಂಡಿರುವವನೇ! ಎದ್ದೇಳು ಮತ್ತು ಎಚ್ಚರಿಕೆ ನೀಡು” [ಅಲ್-ಮುದ್ದಸ್ಸಿರ್: 1-2] ರಿಂದ ಹಿಡಿದು “ಮತ್ತು ಮಾಲಿನ್ಯವನ್ನು ತ್ಯಜಿಸು” [ಅಲ್-ಮುದ್ದಸ್ಸಿರ್: 5] ರವರೆಗಿನ ವಚನಗಳನ್ನು ಅವತೀರ್ಣಗೊಳಿಸಿದನು. ನಂತರ 'ವಹೀ' (ದಿವ್ಯವಾಣಿ) ತೀವ್ರವಾಯಿತು ಮತ್ತು ನಿರಂತರವಾಗಿ ಬರಲಾರಂಭಿಸಿತು."
[صحيح] - [متفق عليه] - [صحيح البخاري - 4]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಪ್ರವಾದಿತ್ವದ ಆರಂಭದಲ್ಲಿ 'ವಹೀ' (ದಿವ್ಯವಾಣಿ) ಬರುವುದು ಸ್ಥಗಿತಗೊಂಡಿದ್ದ ಮತ್ತು ತಡವಾಗಿದ್ದ ಅವಧಿಯ ಬಗ್ಗೆ ವಿವರಿಸುತ್ತಾ ಹೀಗೆ ಹೇಳಿದರು: ನಾನು ಮಕ್ಕಾದ ದಾರಿಗಳಲ್ಲಿ ನಡೆಯುತ್ತಿದ್ದಾಗ ಆಕಾಶದಿಂದ ಒಂದು ಧ್ವನಿಯನ್ನು ಕೇಳಿದೆನು. ನಾನು ನನ್ನ ದೃಷ್ಟಿಯನ್ನು ಮೇಲಕ್ಕೆತ್ತಿದೆನು. ಆಗ, ಹಿರಾ ಗುಹೆಯಲ್ಲಿ ನನ್ನ ಬಳಿಗೆ ಬಂದಿದ್ದ ದೇವದೂತ ಜಿಬ್ರೀಲ್, ಆಕಾಶ ಮತ್ತು ಭೂಮಿಯ ನಡುವೆ ಆಸನದ ಮೇಲೆ ಕುಳಿತಿದ್ದರು. ಅವರನ್ನು ಕಂಡು ನಾನು ಭಯಭೀತನಾದೆನು ಮತ್ತು ಗಾಬರಿಗೊಂಡೆನು. ನಾನು ನನ್ನ ಕುಟುಂಬದವರ ಬಳಿಗೆ ಮರಳಿ, "ನನ್ನನ್ನು ಬಟ್ಟೆಯಿಂದ ಹೊದಿಸಿರಿ" ಎಂದು ಹೇಳಿದೆನು. ಆಗ ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದನು: “ಯಾ ಅಯ್ಯುಹಲ್ ಮುದ್ದಸ್ಸಿರ್” (ಓ ಹೊದ್ದುಕೊಂಡಿರುವವನೇ): ಅಂದರೆ ಬಟ್ಟೆಯನ್ನು ಸುತ್ತಿಕೊಂಡಿರುವವನೇ. “ಕುಮ್” (ಎದ್ದೇಳು): ಅಂದರೆ ಧರ್ಮದ ಕರೆಯೊಂದಿಗೆ ಎದ್ದೇಳು. “ಫ ಅನ್‌ಝಿರ್” (ಎಚ್ಚರಿಕೆ ನೀಡು): ಅಂದರೆ ನಿನ್ನ ಸಂದೇಶದಲ್ಲಿ ವಿಶ್ವಾಸವಿಡದವರಿಗೆ ಎಚ್ಚರಿಕೆ ನೀಡು. “ವ ರಬ್ಬಕ ಫ ಕಬ್ಬಿರ್” (ಮತ್ತು ನಿನ್ನ ರಬ್ಬ್‌ನನ್ನು (ಅಲ್ಲಾಹನನ್ನು) ಮಹಾನನೆಂದು ಘೋಷಿಸು): ಅಂದರೆ ನಿನ್ನ ಆರಾಧನೆಗೆ ಅರ್ಹನಾದವನು ಯಾರೋ ಅವನನ್ನು ಸ್ತುತಿಸು ಮತ್ತು ಘನವೆತ್ತವನೆಂದು ಸಾರು. “ವ ಸಿಯಾಬಕ ಫ ತಹ್ಹಿರ್” (ಮತ್ತು ನಿನ್ನ ಬಟ್ಟೆಗಳನ್ನು ಶುದ್ಧವಾಗಿರಿಸು): ಅಂದರೆ ಅವುಗಳನ್ನು ಕಲ್ಮಶಗಳಿಂದ ಮುಕ್ತವಾಗಿರಿಸು. “ವ ರ್ರುಜ್‍ಝ ಫಹ್ಜುರ್” (ಮತ್ತು ಮಾಲಿನ್ಯವನ್ನು ತ್ಯಜಿಸು): ಅಂದರೆ ವಿಗ್ರಹಗಳು ಮತ್ತು ಪ್ರತಿಮೆಗಳ ಆರಾಧನೆಯನ್ನು ಬಿಟ್ಟುಬಿಡು. ಇದರ ನಂತರ 'ವಹೀ' ಬಲವಾಯಿತು ಮತ್ತು ಹೆಚ್ಚಾಯಿತು.