عَنِ ابْنِ عَبَّاسٍ رَضِيَ اللهُ عَنْهُمَا قَالَ:
مَا قَاتَلَ رَسُولُ اللهِ صَلَّى اللهُ عَلَيْهِ وَسَلَّمَ قَوْمًا قَطُّ حَتَّى يَدْعُوَهُمْ.
[صحيح] - [رواه أحمد والبيهقي] - [سنن البيهقي: 18232]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾವುದೇ ಸಮುದಾಯವನ್ನು (ಇಸ್ಲಾಮಿಗೆ) ಆಹ್ವಾನಿಸದೆ ಅವರೊಂದಿಗೆ ಎಂದಿಗೂ ಯುದ್ಧ ಮಾಡುತ್ತಿರಲಿಲ್ಲ."
[صحيح] - [رواه أحمد والبيهقي] - [سنن البيهقي - 18232]
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರು ತಿಳಿಸಿರುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಾವುದೇ ಸಮುದಾಯವನ್ನು ಮೊದಲು ಇಸ್ಲಾಮಿಗೆ ಆಹ್ವಾನಿಸದೆ ಅವರೊಂದಿಗೆ ಯುದ್ಧ ಆರಂಭಿಸುತ್ತಿರಲಿಲ್ಲ. ಒಂದು ವೇಳೆ ಅವರು ಆ ಕರೆಗೆ ಸ್ಪಂದಿಸದಿದ್ದರೆ, ಆಗ ಅವರೊಂದಿಗೆ ಯುದ್ಧ ನಡೆಸುತ್ತಿದ್ದರು.